ವಾಪಸು ಬೆಂಗಳೂರಿಗೆ ಹೊರಡೊ ತಯಾರಿ ಶುರು ಆದಾಗ ಯಥಾಪ್ರಕಾರ ನನ್ನ ಮನಸ್ಸು ಚೂಡಾ (ನನ್ನ ಮನಸ್ಸು ಮಂಡಿಗೆ ತಿನ್ನೊದಿಲ್ಲ) ತಿನ್ನೊಕೆ ಶುರು ಮಾಡತು. ಫ಼್ಲೈಟ್ ಬೆಂಗಳೂರು ಮುಟ್ಟಿದ ತಕ್ಷಣದಿಂದ ಮುಂದಿನ ನಾಲ್ಕು ತಿಂಗಳು ಏನೇನು ಮಾಡಬೇಕು ಅನ್ನೊದು ಇಷ್ಟುದ್ದ ಪಟ್ಟಿ ಮಾಡಿ ಕಣ್ಣು ಮುಂದೆ ಇಟ್ಕೊಂಡೆ. ಅದರೊಳಗೆ ಬ್ಲಾಗ್ ಬರಿಯೊದೂ ಒಂದು ಇತ್ತು. ಯಾವ ಯಾವ ವಿಷಯದ ಬಗ್ಗೆ ಬರಿಯಬೇಕು ಅನ್ನೊದುನ್ನೂ ಲೆಖ್ಖಾ ಹಾಕಿ ಅಯಿತು.
ಬೆಂಗಳೂರಿಗೆ ಬಂದು ಸುಮಾರು ಎರಡು ವಾರ ಆದ್ರೂನು, ಕಣ್ಣ ಮುಂದೆ ಇರೊ ಪಟ್ಟಿಯೊಳಗಿನ ಒಂದು ಕೆಲಸಾನೂ ಮಾಡ್ಲಿಕ್ಕಿನೂ ಆಗಿಲ್ಲ, ಇಛ್ಛಾನೂ ಪೂರ್ತಿ ಆಗಿಲ್ಲಾ. ಆಫೀಸಿನ ಕೆಲಸದ ಗಡಿಬಿಡಿಯೊಳಗ ಮತ್ತು ಸಿನಿಮಾ ಕಥೆ ಚರ್ಚೆಯೊಳಗ .......ಮತ್ತೆ ಅದೇ ಚಕ್ರದ ಗಿರಕಿಯೊಳಗ ೧೫ ದಿನಾ ಕಳದ್ವು.
ಮೈನಸ್ ೨೬ ಡಿಗ್ರಿಯಿಂದ, ಹದಿನೆಂಟು ಘಂಟೆಯೊಳಗೆ ೩೦ ಡಿಗ್ರಿ ಬಿಸಿಲಿನ ಬಂದಾಗ ಆಗುವ ಅನುಭವಕ್ಕೆ ಅಕ್ಷರ ರೂಪ ಕೊಡಬೇಕು, ಬೆಂಗಳೂರಿನಲ್ಲಿ ಮೂರು ತಿಂಗಳೊಳಗ ಆಗಿರೊ ಸಣ್ಣ-ದೊಡ್ದ ಬದಲಾವಣೆಗಳನ್ನು ಗಮನಿಸಿ ಅವುಗಳ ಬಗ್ಗೆ ಬರಿಬೇಕು, ಈ ಸಣ್ಣ ಮಧ್ಯಂತರದ ನಂತರ ನನ್ನ ನೋಡಿದವರ ಮಾತುಗಳನ್ನ ಇಲ್ಲಿಗೆ ತರಬೇಕು, ಅಂತೆಲ್ಲಾ ಅಂದುಕೊಂಡಿದ್ದೆ. ಆದ್ರ ಅವ್ಯಾವು ಇಲ್ಲಿಯವರಿಗೆ ಆಗಿಲ್ಲ.
ಬೆಂಗಳೂರಿಗೆ ಬಂದ ಮೇಲೆ, ಮಕ್ಕಳ ಜೊತೆ ಭರ್ಪೂರಾಗಿ ಆಟ ಆಡಿದೆ. ಮೈಸೂರು ರೋಡ್‍ಲ್ಲಿರೊ ಹೊಸಾ ಬಿಗ್ ಸಿನೆಮಾದಲ್ಲಿ, "ರೋಡ್ ಮೂವಿ" ಸಿನೆಮಾ ನೋಡಿದೆ, ನೆಟ್‍ಕಲ್ಲಪ್ಪಾ ಸರ್ಕಲ್‍ಲ್ಲಿರೊ ಚಿಕ್ಕ ಅಂಗಡಿನಲ್ಲಿ ಗಿರ್ಮಿಟ್ ಮತ್ತೆ ಮಿರ್ಚಿ ಭಜಿ ಗೆಳೆಯಾ ರಾಜೀವನ ಜೊತೆ ತಿಂದೆ, ಎಲ್‍ಐಸಿ ದುಡ್ಡು ಕಟ್ಟೋ ನೆವದಾಗ ೫-೬ ವರ್ಷದ ನಂತರ ಯಶವಂತರಪುರ ಕಣ್ಣರಳಿಸಿ ತಿರಗಾಡಿದೆ, ಕಾಲು ನೋವು ಅಂತ ಮಲಗಿದ್ದ ರಾಜೀವನ್ನ ಅಪೊಲೋಗೆ ಕರ್ಕೋಂಡು ಹೋಗಿದ್ದೆ, "ಚಾಟ್ಸ್ ಶೋ" ಅನ್ನೋ ನೆವಾದಾಗ ಪೂಜಾ ಗಾಂಧಿ, ರಘು ಮುಖರ್ಜಿ ಜೊತೆ ಪಾನಿ ಪೂರಿ ತಿಂದು ಸಿನಿಮಾದ ಬಗ್ಗೆ ಹರಟೆ ಹೊಡ್ದೆ, ಎಷ್ಟೊ ವರ್ಷದ ನಂತರ ಭೇಟಿ ಆದ ಸಂಗಮೇಶ ಜೊತೆ ಪುಸ್ತಕ ಮೇಳಕ್ಕೆ ಹೋಗಿದ್ದೆ, ಇವ್ಯಾವು ನಾ ಮಾಡಬೇಕು ಅಂತ ಅನ್ಕೊಂಡಿರಲ್ಲಿಲ್ಲ ಆದರೂ ಈ ಸಣ್ಣ ಸಣ್ಣ ಖುಷಿಯನ್ನ ಬೊಗಸೆಯೊಳಗೆ ಹಿಡ್ಕೊಂಡೆ.
ಏನೇ ಆದ್ರೂ ನಮ್ಮೂರನೊಳಗ, ನಮ್ಮವರ ಜೋಡಿ ಇರೋದೆ ಒಂದು ಸಂತೋಷ. ಅದಕ್ಕೆ ಅಲ್ವಾ ಹಿರಿಯರು ಹೇಳಿದ್ದು, ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ....ಅಂತ.
ಗುರುವಾರ, ಮಾರ್ಚ್ 11, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
5 ಕಾಮೆಂಟ್‌ಗಳು:
Nimma baravanige shaily tumba chennagide...Kettu pattna seru anno ee kaladalli..halliya yava nedavalikegalannu mareyo janara madhye..nimma basha shailey hrudayakke neravagi natutte...
Nimma uttarakannada basheyalli inno hechhina lekhana oduva aaseyulla..nimma chandadara :-)
ಶ್ರೀಕಾಂತ,
ನಮಸ್ಕಾರ. ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು. ಉತ್ತರ ಕರ್ನಾಟಕದ ಶೈಲಿಯ ಬರವಣಿಗೆ ನಿಮಗೆ ಇಷ್ಟವಾಗಿದ್ದು ತಿಳಿದು ಸಂತೋಷವಾಯಿತು.
-ಗುರುರಾಜ
nangu ashte bhaashe khushi kodtu:):)
ಹೆಗಡೆಯವರೆ,
ಥ್ಯಾಂಕ್ಸ್. ನನ್ನ ಹರಟೆ ಪ್ರಯತ್ನ, ಇದೇ ಭಾಷಾ ಶೈಲಿಯಲ್ಲಿ ಮುಂದುವರಿಸುತ್ತೇನೆ.
-ಗುರುರಾಜ
ಸರ್ ತುಂಬಾ ಒಳ್ಳೇ ಬರವಣಿಗೆ, ನೀವು ಇಷ್ಟೊಂದ್ ಚೆನ್ನಾಗಿ ಪದಗಳ ಜೋಡಣೆ ಮಾಡ್ತೀರಾ ಅಂತ ನಾನು ಊಹಿಸಿರಲಿಲ್ಲ ಸರ್. ತುಂಬಾ ಕುಶಿ ಆಯ್ತು :)
ಸರ್ ಯಾಕೆ ಸರ್ ಮಾರ್ಚ್ 2011ಕ್ಕೇ ಬರಿಯೊದನ್ನ ನಿಲ್ಸಿದ್ದೀರಾ, ದಯವಿಟ್ಟು ಸಮಯ ಸಿಕ್ಕಾಗಲೆಲ್ಲ ನೀವು ಬರಿರಿ ಸರ್, ನೆನಪಿರಲಿ ನಾವು ನಿಮ್ಮ ಅಭಿಮಾನಿ ದೇವರುಗಳು :)
ಕಾಮೆಂಟ್ ಪೋಸ್ಟ್ ಮಾಡಿ